2019ರಲ್ಲಿ ಸಂಭವಿಸಲಿವೆ 5 ಗ್ರಹಣ, ಭಾರತದಲ್ಲಿ 2 ಗ್ರಹಣ ಗೋಚರ

6,516

ಮುಂದಿನ ವರ್ಷ ಖಗೋಳ ವಿಜ್ಞಾನಿಗಳು ಮತ್ತು ಸೌರವ್ಯೂಹ ವಿದ್ಯಮಾನದ ಕುತೂಹಲಿಗಳಿಗೆ ಮಹತ್ವದ ವರ್ಷ. 2019ರಲ್ಲಿ ಜೋತಿರ್ಮಂಡಲದಲ್ಲಿ ಒಟ್ಟು ಐದು ಗ್ರಹಣಗಳು ಸಂಭವಿಸಲಿದೆ. ಈ ಅಂತರಿಕ್ಷ ಕೌತುಕಗಳಲ್ಲಿ ಎರಡು ಭಾರತದಲ್ಲಿಯೂ ಗೋಚರಿಸಲಿದೆ.

# ಜನವರಿಯಲ್ಲಿ 2 ಗ್ರಹಣ: ಜನವರಿ 6ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಇದು ಭಾರತದಲ್ಲಿ ಗೋಚರಿಸುವುದಿಲ್ಲ ಎಂದು ಮಧ್ಯಪ್ರದೇಶದ ಉಜೈನ್‍ನ ಜಿವಾಜಿ ಸೌರ ವೀಕ್ಷಣಾಲಯದ ವರಿಷ್ಠಾಧಿಕಾರಿ ಡಾ. ರಾಜೇಂದಪ್ರಕಾಶ್ ಗುಪ್ತ ವಿವರಿಸಿದ್ದಾರೆ. ಜನವರಿ 21ರಂದು ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಅದೂ ಕೂಡ ಭಾರತದಲ್ಲಿ ಕಾಣಿಸುವುದಿಲ್ಲ. ಆಗ ಇಲ್ಲಿ ಹಗಲು ಸಮಯವಾದ್ದರಿಂದ ಇದು ಗೋಚರಿಸದು ಎಂದು ಗುಪ್ತ ತಿಳಿಸಿದ್ದಾರೆ.

# ಜುಲೈನಲ್ಲಿ 2 ಗ್ರಹಣ : ಜುಲೈ 2-3ರಂದು ಖಗ್ರಾಸ ಸೂರ್ಯ ಗ್ರಹಣ ಸಂಭವಿಸಲಿದೆ. ಅದು ಕೂಡ ಭಾರತದಲ್ಲಿ ಕಾಣಿಸುವುದಿಲ್ಲ. ಇಲ್ಲಿ ಆಗ ರಾತ್ರಿಯಾಗುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ಮತ್ತೆ ಜುಲೈ 16-17ರಂದು ಭಾಗಶಃ ಚಂದ್ರಗ್ರಹಣವಾಗಲಿದೆ. ಅದು ಭಾರತದಲ್ಲಿ ಗೋಚರಿಸಲಿದೆ. ಡಿಸೆಂಬರ್ 26ರಂದು ಉಂಗುರ ಆಕಾರದ ವಿಸ್ಮಯ ಸೂರ್ಯ ಗ್ರಹಣವಾಗಲಿದೆ ಇದನ್ನೂ ಕೂಡ ನಾವು ವೀಕ್ಷಿಸಬಹುದು ಎಂದು ತಿಳಿಸಿದರು. 2018ರಲ್ಲಿ ಐದು ಗ್ರಹಣಗಳು ಸಂಭವಿಸಿತ್ತು. ಇದರಲ್ಲಿ ಎರಡು ಸಂಪೂರ್ಣ ಚಂದ್ರ ಗ್ರಹಣ ಹಾಗೂ ಮೂರು ಭಾಗರ್ಶ ಸೂರ್ಯ ಗ್ರಹಣಗಳಾಗಿದ್ದವು.

Leave A Reply

Your email address will not be published.