ಚೀನಾ ಕಂಪೆನಿಗಳಿಗೆ ಬ್ರೇಕ್ ಹಾಕಲು ಭಾರತೀಯರಿಗೆ ಸಿಹಿಸುದ್ದಿ ನೀಡಿದ ಸ್ಯಾಮ್‌ಸಂಗ್!

7,778

ಭಾರತದಲ್ಲಿ ನಂ.1 ಸ್ಥಾನದಿಂದ ಕೆಳಕ್ಕಿಳಿದಿರುವ ಜನಪ್ರಿಯ ಮೊಬೈಲ್ ಕಂಪೆನಿ ‘ಸ್ಯಾಮ್‌ಸಂಗ್’ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಎದ್ದುಬರಲು ತಯಾರಿ ನಡೆಸಿದೆ. ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಮೊದಲ ಸ್ಥಾನವನ್ನು ಮತ್ತೆ ಗಳಿಸಿಕೊಳ್ಳುವ ಸಲುವಾಗಿ ಸ್ಯಾಮ್‌ಸಂಗ್ ಭರ್ಜರಿ ತಯಾರಿಯೊಂದನ್ನು ನಡೆಸಿದ್ದು, ಇದು ಭಾರತೀಯರಿಗೂ ಸಿಹಿಸುದ್ದಿಯಾಗಿದೆ.

ಹೌದು, ಹೊಸ ವರ್ಷಕ್ಕೆ ಸ್ಯಾಮ್‌ಸಂಗ್ ಏನಾದರೂ ಭರ್ಜರಿ ಆಫರ್ ನೀಡಲಿದೆ ಎಂಬ ಮೊಬೈಲ್ ಪ್ರಿಯರ ನಿರೀಕ್ಷೆಯನ್ನು ಸುಳ್ಳುಮಾಡಿರುವ ಕಂಪೆನಿ ಅದಕ್ಕೂ ಮೀರಿದ ಮತ್ತೊಂದು ಮತ್ತೊಂದು ಸಿಹಿಸುದ್ದಿಯೊಂದನ್ನು ನೀಡಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೇಶದಲ್ಲಿ ತನ್ನ ಹೊದ ಸರಣಿಯ ಬಜೆಟ್ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಲು ಕಂಪೆನಿ ಮುಂದಾಗಿದೆ.

ಇಂದು ಹೊರಬಿದ್ದಿರುವ ಒಂದು ವರದಿ ಪ್ರಕಾರ, ಈ ಹೊಸ ವರ್ಷಕ್ಕೆ ಸ್ಯಾಮ್‌ಸಂಗ್ ತನ್ನ ನೂತನ ಸರಣಿಯ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮೊಬೈಲ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವರದಿಯ ಪ್ರಮುಖ ವಿಶೇಷವೆಂದರೆ, ಈ ಸರಣಿ ಸ್ಮಾರ್ಟ್‌ಪೋನ್‌ಗಳು ಭಾರತದಲ್ಲೇ ಮೊದಲು ಬಿಡುಗಡೆಯಾಗುತ್ತಿವೆ ಎಂಬುದನ್ನು ಕಂಪೆನಿ ಮೂಲಗಳು ತಿಳಿಸಿವೆ.

ಐಎಎನ್‌ಎಸ್ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಜಾಗತಿಕಮಟ್ಟದಲ್ಲಿ ಮೊದಲ ಬಾರಿಗೆ ಸ್ಯಾಮ್‌ಸಂಗ್ ಸ್ಮಾರ್ಟ್‌ಪೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿವೆ. ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ಪ್ರಿಯರನ್ನು ಸೆಳೆಯುವ ಸಲುವಾಗಿ ಸ್ಯಾಮ್‌ಸಂಗ್ ಕಂಪೆನಿ ನೂತನವಾಗಿ ‘ಗ್ಯಾಲಕ್ಸಿ M’ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ದೇಶದಲ್ಲಿ ಮೊದಲು ಬಿಡುಗಡೆ ಮಾಡುತ್ತಿದೆ.

Leave A Reply

Your email address will not be published.