ಉಮೇಶ್‌ ಕತ್ತಿ ಸರಕಾರ ಪತನದ ಹೇಳಿಕೆಗೆ ಬಿಎಸ್‌ವೈ ತೀವ್ರ ವಿರೋಧ

7,071

ವಿಜಯಪುರ : 24 ಗಂಟೇಲಿ ಸರ್ಕಾರ ಮನೆಗೆ ಹೋಗುತ್ತದೆ ಎಂದು ಉಮೇಶ್‌ ಕತ್ತಿ ಅವರು ನೀಡಿರುವ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ತೀವ್ರ ವಿರೋಧ ವ್ಯಕ್ತ ಪಡಿಸಿ, ಸರ್ಕಾರ ಪತನದ ಕುರಿತು ಹೇಳಿಕೆ ನೀಡಬಾರದಿತ್ತು ಎಂದಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾವು ಒಟ್ಟು 104 ಮಂದಿ ಶಾಸಕರಿದ್ದು ಸರಕಾರ ಅದಾಗಿಯೇ ಪತನವಾದರೆ ಮಾತ್ರ ಸರಕಾರ ರಚನೆಯ ಬಗ್ಗೆ ಯೋಚನೆ ಮಾಡುತ್ತೇವೆ.ನಾವೇನು ಸನ್ಯಾಸಿಗಳಲ್ಲ’ ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ ಎಚ್‌.ಡಿ.ದೇವೇಗೌಡರು ಸ್ಪರ್ಧಿಸುತ್ತಾರಂತೆ ಎಂಬ ಪ್ರಶ್ನೆಗೆ ‘ಯಾರು ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವುದು ಮುಖ್ಯವಲ್ಲ. ನಾವು ಎಲ್ಲಾ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ’ ಎಂದರು.

Leave A Reply

Your email address will not be published.