ಸಿಬಿಎಸ್‌ಇ 10, 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

3,338

ನವದೆಹಲಿ (ಡಿ. 24): 2019 ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಸಿಬಿಎಸ್‌ಇಯ 12 ತರಗತಿಯ ವಿವಿಧ ವಿಷಯಗಳ ಪರೀಕ್ಷೆಗಳು ಫೆ.12 ರಿಂದ ಆರಂಭವಾಗಿ ಏ.3 ಕ್ಕೆ ಮುಗಿಯಲಿವೆ. ಹಾಗೆಯೇ ಫೆ.21 ರಿಂದ ಮಾ. 29 ರವರೆಗೂ 10 ನೇ ತರಗತಿ ಪರೀಕ್ಷೆ ನಡೆಯಲಿವೆ ಎಂದು ಸಿಬಿಎಸ್‌ಇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಪರೀಕ್ಷಾ ವೇಳಾಪಟ್ಟಿಯನ್ನು ಜ.10 ಕ್ಕೆ ಬಿಡುಗಡೆ ಮಾಡಲಾಗಿತ್ತು.

Leave A Reply

Your email address will not be published.