ರಾಜಸ್ಥಾನದಲ್ಲಿ ಸಂಪುಟ ರಚನೆ: 23 ಸಚಿವರಿಂದ ಪ್ರಮಾಣವಚನ ಸ್ವೀಕಾರ

3,317

ಜೈಪುರ, ಡಿ.24: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅಧಿಕಾರ ಸ್ವೀಕರಿಸಿದ ಒಂದು ವಾರದಲ್ಲಿ ಜೈಪುರದಲ್ಲಿ ಇಂದು 23 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಪುಟದಲ್ಲಿ 18 ಹೊಸಮುಖಗಳಿಗೆ ಅವಕಾಶ ನೀಡಲಾಗಿದೆ. ಮೈತ್ರಿಕೂಟದ ಓರ್ವ ಶಾಸಕನಿಗೆ ಸಚಿವ ಸ್ಥಾನ ನೀಡಲಾಗಿದೆ. ಓರ್ವ ಮಹಿಳಾ ಶಾಸಕಿ ಮಮತಾ ಭೂಪೇಶ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಭರತ್‌ಪುರ ರಾಜಮನೆತನದ ಮಹಾರಾಜ್ ವಿಶ್ವೇಂದ್ರ ಸಿಂಗ್ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಅಶೋಕ್ ಗೆಹ್ಲೋಟ್ ಸರಕಾರದಲ್ಲಿ ಹಿರಿಯ ಸಚಿವರಾಗಿದ್ದ ಸಿ.ಪಿ. ಜೋಶಿ, ಭರತ್ ಸಿಂಗ್ ಹಾಗೂ ಮಾಜಿ ಸ್ಪೀಕರ್ ದಿಪೇಂದ್ರ ಸಿಂಗ್‌ಗೆ ಅವಕಾಶ ನೀಡಲಾಗಿಲ್ಲ.

ರಾಜಸ್ಥಾನ ಸರಕಾರದಲ್ಲಿ ಮುಖ್ಯಮಂತ್ರಿ ಸೇರಿದಂತೆ 30 ಸಚಿವರಿಗೆ ಅವಕಾಶವಿದೆ.

Leave A Reply

Your email address will not be published.