ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಬ್ಯಾಂಕುಗಳ ಕರ್ಮಕಾಂಡ, ಗ್ರಾಹಕರಿಂದ 10 ಸಾವಿರ ಕೋಟಿ ವಸೂಲಿ

2,931

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹಾಗು ಖಾಸಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಖಾತೆಯಲ್ಲಿ ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್ ಹೊಂದಿರಬೇಕು ಎಂಬ ನಿಯಮವನ್ನು ವಿಧಿಸಿವೆ.

ಕನಿಷ್ಟ ಮೊತ್ತ ನಿಯಮ ಹಿಂದಿನಿಂದಲೂ ಜಾರಿಯಲ್ಲಿದ್ದರೂ ಇರಬೇಕಾಗಿದ್ದ ಕನಿಷ್ಟ ಮೊತ್ತದ ಪ್ರಮಾಣ ಕಡಿಮೆಯಿತ್ತು. ಆದರೆ ಈಗ ಏರಿಕೆ ಮಾಡಲಾಗಿದ್ದು, ಇದು ಗ್ರಾಹಕರಿಗೆ ಹೊರೆಯಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಹೋಗುತ್ತಿದೆ.10 ಸಾವಿರ ಕೋಟಿ ವಸೂಲಿ

ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಮೂರೂವರೆ ವರ್ಷಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿಯಮದ ಅಡಿಯಲ್ಲಿ ಬರೋಬ್ಬರಿ ರೂ. 10 ಸಾವಿರ ಕೋಟಿಗೂ ಅಧಿಕ ಹಣವನ್ನು ವಸೂಲಿ ಮಾಡಿವೆ. ನಿಯಮ ಉಲ್ಲಂಘನೆ ಹಾಗೂ ನಿಗದಿಪಡಿಸಲಾದ ಎಟಿಎಂ ವಹಿವಾಟು ಮೀರಿದ ಕಾರಣಕ್ಕೆ ಗ್ರಾಹಕರಿಂದ ಕಳೆದ ಮೂರೂವರೆ ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಇಷ್ಟೊಂದು ಮಟ್ಟದಲ್ಲಿ ಲೂಟಿ ಮಾಡಿವೆ.

ಯಾವ ಬ್ಯಾಂಕ್ ಎಷ್ಟು?

ಮಿನಿಮಮ್ ಬ್ಯಾಲೆನ್ಸ್ ನಿಯಮದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 2894 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ. 493 ಕೋಟಿ, ಕೆನರಾ ಬ್ಯಾಂಕ್ ರೂ. 352 ಕೋಟಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ರೂ. 348 ಕೋಟಿ, ಬ್ಯಾಂಕ್ ಆಫ್ ಬರೋಡಾ ರೂ. 328 ಕೋಟಿ ಸಂಗ್ರಹಿಸಿವೆ.

ಎಟಿಎಂ ವಹಿವಾಟು ಶುಲ್ಕ

ಮೆಟ್ರೋ, ನಗರ, ಗ್ರಾಮೀಣ ಭಾಗದ ಗ್ರಾಹಕರನ್ನು ಆಧರಿಸಿ ಮಾಸಿಕ 5 ಉಚಿತ ಎಟಿಎಂ ವಹಿವಾಟನ್ನು ನಿಗದಿಪಡಿಸಿ ನಂತರದ ವ್ಯವಹಾರಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಈ ವಹಿವಾಟಿನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 1554 ಕೋಟಿ , ಬ್ಯಾಂಕ್ ಆಫ್ ಇಂಡಿಯಾ ರೂ. 464 ಕೋಟಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ. 323 ಕೋಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ರೂ. 241 ಕೋಟಿ, ಬ್ಯಾಂಕ್ ಆಫ್ ಬರೋಡಾ ರೂ. 181 ಕೋಟಿ ಚಾರ್ಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.