ನ್ಯಾಶನಲ್ ಹೆರಾಲ್ಡ್ ಪ್ರಕರಣ: ಮಾಲಕರಿಗೆ ಕಚೇರಿ ತೆರವುಗೊಳಿಸಲು ದಿಲ್ಲಿ ಹೈಕೋರ್ಟ್ ಆದೇಶ

1,239

ಹೊಸದಿಲ್ಲಿ, ಡಿ.21: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿರುವ ದಿಲ್ಲಿ ಹೈಕೋರ್ಟ್ ಶುಕ್ರವಾರ ಪತ್ರಿಕೆಯ ಪ್ರಕಾಶಕರಿಗೆ ದಿಲ್ಲಿಯಲ್ಲಿರುವ ಪ್ರಧಾನ ಕಚೇರಿಯನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ.

56 ವರ್ಷಗಳ ಲೀಸ್ ನ್ನು ಅಕ್ಟೋಬರ್ 30ರಂದು ಸರಕಾರ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೆಟೆಡ್ ಜರ್ನಲ್ಸ್ ಲಿಮಿಟೆಡ್ ಹೈಕೋರ್ಟ್ ಮೊರೆ ಹೋಗಿತ್ತು.

ಕೇಂದ್ರ ದಿಲ್ಲಿಯ ಐಟಿಒ ಪ್ರದೇಶದಲ್ಲಿರುವ ಕಚೇರಿಯನ್ನು ಎರಡು ವಾರಗಳ ಒಳಗಾಗಿ ತೆರವುಗೊಳಿಸುವಂತೆ ಮಾಲಕರಿಗೆ ನ್ಯಾಯಾಲಯದ ಆದೇಶ ನೀಡಿದೆ.

Leave A Reply

Your email address will not be published.