ವೈಕುಂಠ ಏಕಾದಶಿ, ಮೋಕ್ಷಕ್ಕಾಗಿ ಪ್ರಾರ್ಥಿಸುವ ದಿನ: ದೇಗುಲಗಳ ವಿಶೇಷ

7,970

ಬೆಂಗಳೂರು, ಡಿಸೆಂಬರ್ 18: ವೈಕುಂಠ ಏಕಾದಶಿ ಆಚರಣೆ ರಾಜ್ಯದೆಲ್ಲೆಡೆ ಆರಂಭವಾಗಿದೆ. ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಲಿದ್ದು, ಭಕ್ತರಿಗೆ ವೈಕುಂಠ ದ್ವಾರ ಪ್ರವೇಶ ಮಾಡಿ ದೇವರ ದರುಶನ ಪಡೆಯುವ ಅವಕಾಶ ಲಭ್ಯವಾಗಲಿದೆ.

ವೈಕುಂಠ ಏಕಾದಶಿಯು ಪ್ರತಿ ವರ್ಷದ ಸಡಗರ, ಭಕ್ತರು ಎಲ್ಲೋ ಇರುವ ದೇವರನ್ನು ಹುಡುಕಿಕೊಂಡು ಬಂದು ನಮ್ಮೊಂದಿಗೇ ಇದ್ದಾನೆ ಎನ್ನುವ ಭಾವವನ್ನು ವ್ಯಕ್ತಪಡಿಸುತ್ತಾರೆ.ದೇಗುಲದ ವೈಕುಂಠ ದ್ವಾರದಲ್ಲಿ ನಿಂತು ಭಕ್ತರು ಮೋಕ್ಷಕ್ಕಾಗಿ ಪ್ರಾರ್ಥಿಸುವುದು. ಸ್ವಾಮಿಯ ಅಲಂಕಾರವನ್ನು ನೋಡುವುದೇ ಚಂದ.

ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ ಆಚರಣೆ ಹೇಗೆ, ವಿಶೇಷ ಏನು?

ಇದರಲ್ಲಿ ಎರಡು ಪದಗಳು ಸೇರಿಕೊಂಡಿದೆ, ಒಂದು ವೈಕುಂಠ ಎಂದರೆ ವಿಷ್ಣುಲೋಕ.ವಿಷ್ಣುವಿಗೆ ವೈಕುಂಠ ಎಂದು ಹೆಸರು ಬರಲು ಕಾರಣ ಚಾಕ್ಷುಷ ಮನ್ವಂತರದಲ್ಲಿ ವಿಷ್ಣುವು ವಿಕುಂಠ ಎಂಬ ಸ್ತ್ರೀ ಯಲ್ಲಿ ಅವತರಿಸಿದನು.

ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂದಿದೆ ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ವಿಷ್ಣು ಸಹಸ್ರನಾಮದಲ್ಲೂ ವೈಕುಂಠ ಎಂಬ ಹೆಸರಿನ ಉಲ್ಲೇಖವಾಗಿದೆ.ಮರಿ ತಿರುಪತಿ 
ಮರಿ ತಿರುಪತಿಯಲ್ಲಿ ವೈಕುಂಠ ಏಕಾದಶಿ

ಶ್ರೀ ಶ್ರೀನಿವಾಸ ದೇವಸ್ಥಾನದ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಆಚರಣೆ ನಡೆಸಲಾಗುತ್ತಿದೆ. ಮರಿ ತಿರುಪತಿ ಖ್ಯಾತಿಯ ಮಹಾಲಕ್ಷ್ಮೀಪುರಂ ದೇವಾಲಯದ ಆವರಣದಲ್ಲಿ ಮುಜಾನೆಯಿಂದ ರಾತ್ರಿವರೆಗೂ ವಿಶೇಷ ಪೂಜೆ ನಡೆಯಲಿದೆ. ಭಕ್ತರಿಗೆ ವೈಕುಂಠ ದ್ವಾರ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.

ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನ 
ವಸಂತನಗರದ ಶ್ರೀಲಕ್ಷ್ಮೀ ವೆಂಟರಮಣಸ್ವಾಮಿ ದೇವಸ್ಥಾನ

ವಸಂತನಗರದ ಶ್ರೀ ಲಕ್ಷ್ಮೀ ವೆಂಕಟರಮಣಸ್‌ಔಆಮಿ ದೇವಸ್ಥಾನದ ಅಭಿವೃದ್ಧಿ ಸಂಘವು ಧನುರ್ಮಾಸದ ಪೂಜೆ ಹಾಗೂ ಡಿ.18ರಂದು ವೈಕುಂಠ ಏಕಾದಶಿಯನ್ನು ಹಮ್ಮಿಕೊಂಡಿದೆ. ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ, ಆರಾಧನೆ, ವೈಕುಂಠದ್ವಾರ ಪೂಜೆ, ಮಹಾ ಮಂಗಳಾರತಿ ನಡೆಯಲಿದೆ.

ಬೆಟ್ಟನ ಪಾಳ್ಯ ದೇವಾಲಯ 
ಶ್ರೀ ಸ್ತಂಭದ ಲಕ್ಷ್ಮೀ ರಂಗನಾಥಸ್ವಾಮಿ, ಬೆಟ್ಟನಪಾಳ್ಯ ದೇವಾಲಯ

ಕೆಂಗೇರಿ ಹೋಬಳಿ ಬೆಟ್ಟನಪಾಳ್ಯ ಶ್ರೀ ಸ್ತಂಭದ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 2 ಗಂಟೆಗೆ ಸುಪ್ರಭಾತದೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. ಸ್ವಾಮಿಗೆ ಪಂಚಾಮೃತಾಭಿಷೇಕ ಹಾಗೂ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಗುತ್ತಿದೆ.

ವೆಂಕಟೇಶ್ವರಸ್ವಾಮಿ ದೇವಸ್ಥಾನ 
ವೆಂಕಟೇಶ್ವರಸ್ವಾಮಿ ದೇಗುಲ

ನಿಸರ್ಗ ಬಡಾವಣೆಯ ನಿರ್ಮಾಣ್ ದೇವಾಲಯಗಳ ವಿಶ್ವಸ್ಥ ಮಂಡಳಿಯು ಡಿ.18ರಂದು ಶ್ರೀ ಪ್ರಸನ್ನ ವರದ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.


Leave A Reply

Your email address will not be published.