ಮುಂಬಯಿ ಶೇರು ಗೆಲುವಿನ ಓಟ 6ನೇ ದಿನಕ್ಕೆ: 77 ಅಂಕ ಜಂಪ್‌

7,886

ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಅನುಭವಿಸಿದ ನಷ್ಟವನ್ನೆಲ್ಲ ಹಿಂದಿಕ್ಕುವಲ್ಲಿ ಸಫ‌ಲವಾದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ದಿನದ ವಹಿವಾಟನ್ನು 77.01 ಅಂಕಗಳ ಏರಿಕೆಯೊಂದಿಗೆ 36,347.08 ಅಂಕಗಳ ಮಟ್ಟವನ್ನು ತಲುಪಿ ನಿರಂತರ ಆರನೇ ದಿನದ ಗೆಲುವಿನ ಓಟವನ್ನು ಕಾಯ್ದುಕೊಳ್ಳುವಲ್ಲಿ ಸಫ‌ಲವಾಯಿತು.

ಕಳೆದ ಐದು ದಿನಗಳ ನಿರಂತರ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್‌ ಒಟ್ಟು 1,310 ಅಂಕಗಳನ್ನು ಸಂಪಾದಿಸಿದೆ.

ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 20.35 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 10,908.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಡಾಲರ್‌ ಎದುರು ರೂಪಾಯಿ ಚೇತರಿಕೆ ಕಂಡದ್ದೇ ಇಂದು ಶೇರು ಮಾರುಕಟ್ಟೆಗೆ ಹುರುಪು ನೀಡಿತು.

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,723 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,441 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,119 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 163 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.

Leave A Reply

Your email address will not be published.