ಬಿಎಸ್‌ಎನ್‌ಎಲ್ ಸಿಬ್ಬಂದಿಗೆ ಸಿಹಿಸುದ್ದಿ ನೀಡಲಿದೆ ಮೋದಿ ಸರ್ಕಾರ್!

7,166

ಸರ್ಕಾರಿ ಸ್ವಾಮ್ಯದ ಭಾರತೀಯ ಸಂಚಾರ ನಿಗಮ ನಿಯಮಿತ(ಬಿಎಸ್‌ಎನ್‌ಎಲ್) ನ ಸಿಬ್ಬಂದಿಗೆ ಮೋದಿ ಸರ್ಕಾರವು ಸಿಹಿ ಸುದ್ದಿ ನೀಡಲಿದೆ. ಬಿಎಸ್‌ಎನ್‌ಎಲ್ ನೌಕರರ ಬಹುಕಾಲ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಏಳನೇ ವೇತನ ಆಯೋಗದಂತೆ ವೇತನ ಹಾಗೂ ಪಿಂಚಣಿ ಪರಿಷ್ಕರಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ, ಡಿಸೆಂಬರ್ 13ರಂದು ಹಲವು ನಿರ್ಧಾರ ಪ್ರಕಟಿಸಲಾಗಿದೆ.

ಮೂಲ ವೇತನ ಆಧಾರದಲ್ಲಿ ಪಿಂಚಣಿ ಪಾಲು ಪಾವತಿ, ಪಿಂಚಣಿ ಪರಿಷ್ಕರಣೆ, ಬಾಕಿ ಉಳಿದ ಪಾವತಿಗೆ ಕ್ರಮ, ವೇತನ ‌ಪರಿಷ್ಕರಣೆ ಬಗ್ಗೆ ತೀರ್ಮಾನ‌ ಕೈಗೊಳ್ಳಲಾಗಿದೆ.‌ ಇದರೊಟ್ಟಿಗೆ 4ಜಿ ಸ್ಪೆಕ್ರ್ಟಮ್ ನೀಡಿಕೆ ಬಗ್ಗೆ ನಿರ್ಧರಿಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಯೂನಿಯನ್ ಹೇಳಿದೆ.

ಜಿಯೋಗೆ ಕೇಂದ್ರ ಪೋಷಣೆ ಆರೋಪ:ಬಿಎಸ್‌ಎನ್‌ಎಲ್ ನೌಕರರ ಮುಷ್ಕರ

ಸಂಪೂರ್ಣ ವೇತನ ಪರಿಷ್ಕರಣೆ ಹಾಗೂ ಶೇ 15ರ ಫಿಟ್ಮೆಂಟ್ ನಂತೆ ಭತ್ಯೆ ನೀಡುವಂತೆ ಬಿಎಸ್‌ಎನ್‌ಎಲ್ ಸಿಬ್ಬಂದಿ ಬೇಡಿಕೆ ಒಡ್ಡಿದ್ದಾರೆ. 4 ಜಿ ತರಂಗಗುಚ್ಛಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ನೀಡುವಂತೆ ಕೂಡಾ ಕೋರಲಾಗಿದೆ. ಈ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಉಂಟಾಗಿರುವ ಪೈಪೋಟಿಗೆ ಬಿಎಸ್‌ಎನ್‌ಎಲ್ ತಕ್ಕ ಉತ್ತರ ನೀಡಲು ಸಜ್ಜಾಗುತ್ತಿದೆ.

Leave A Reply

Your email address will not be published.