ಗಡೀಪಾರು ಆದೇಶ ಆಯ್ತು; ಈಗಿನ್ನು ದೀವಾಳಿ ದಾವೆ ಎದುರಿಸುವ ಮಲ್ಯ

2,417

ಒಂಭತ್ತು ಸಾವಿರ ಕೋಟಿ ರೂ ಬ್ಯಾಂಕ್‌ ಸಾಲ ಸುಸ್ತಿಗಾರನಾಗಿ ವಿದೇಶಕ್ಕೆ ಪಲಾಯನಗೈದು ಈಚೆಗಷ್ಟೇ ಭಾರತಕ್ಕೆ ಗಡೀಪಾರಾಗುವ ಆದೇಶಕ್ಕೆ ಗುರಿಯಾಗಿರುವ ಮದ್ಯದೊರೆ ವಿಜಯ್‌ ಮಲ್ಯ ಅವರಿನ್ನು ಬ್ರಿಟನ್‌ ಕೋರ್ಟಿನಲ್ಲಿ ದೀವಾಳಿ ವಿಚಾರಣೆಯನ್ನು ಎದುರಿಸಲಿದ್ದಾರೆ.

ಈಚೆಗಷ್ಟೇ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಕೋರ್ಟಿನಿಂದ ಭಾರತಕ್ಕೆ ಗಡೀಪಾರು ಗೊಳ್ಳುವ ಆದೇಶಕ್ಕೆ ಒಳಪಟ್ಟಿರುವ ವಿಜಯ್‌ ಮಲ್ಯ ಪ್ರಕೃತ ಜಾಮೀನಿನಲ್ಲಿ ಹೊರಗುಳಿದಿದ್ದಾರೆ.

ವಿಜಯ್‌ ಮಲ್ಯ ಅವರಿಂದ 1.145 ಬಿಲಿಯ ಪೌಂಡ್‌ ಸಾಲ ವಸೂಲಿಗಾಗಿ ಆತನ ವಿರುದ್ಧ ಭಾರತೀಯ ಬ್ಯಾಂಕುಗಳು ಜತೆಗೂಡಿ ಹೂಡಿರುವ ದೀವಾಳಿ ದಾವೆಯ ವಿಚಾರಣೆ ಮುಂದಿನ ವರ್ಷ ಆರಂಭಗೊಳ್ಳಲಿದೆ.

62ರ ಹರೆಯದ ವಿಜಯ್‌ ಮಲ್ಯ ವಿರುದ್ಧದ ದೀವಾಳಿ ಅರ್ಜಿಯನ್ನು ಲಂಡನ್‌ ಹೈಕೋರ್ಟಿನ ದೀವಾಳಿ ಪಟ್ಟಿಗೆ ವರ್ಗಾಯಿಸಲಾಗಿದ್ದು 2019ರ ಮೊದಲರ್ಧದಲ್ಲಿ ಮಲ್ಯ ವಿರುದ್ಧದ ದೀವಾಳಿ ವಿಚಾರಣೆಯ ಕೋರ್ಟ್‌ ಪ್ರಕ್ರಿಯೆ ಆರಂಭವಾಗಲಿದೆ. ಎಸ್‌ಬಿಐ ನೇತೃತ್ವದಲ್ಲಿ 13 ಭಾರತೀಯ ಬ್ಯಾಂಕುಗಳು ಮಲ್ಯ ವಿರುದ್ಧ ದೀವಾಳಿ ದಾವೆಯನ್ನು ಈ ವರ್ಷದ ಆದಿಯಲ್ಲಿ ದಾಖಲಿಸಿದ್ದವು.

Leave A Reply

Your email address will not be published.