ಇದು ಮೋದಿಗೆ ಗೊತ್ತಾ?: GSTಯಲ್ಲಿ 12 ಸಾವಿರ ಕೋಟಿ ಗೋತಾ!

6,990

ಆಧುನಿಕ ತಂತ್ರಜ್ಞಾನ, ಇ-ಬಿಲ್ ವ್ಯವಸ್ಥೆ, ಎಲೆಕ್ಟ್ರಾನಿಕ್ ಕಣ್ಗಾವಲು ಇದೆಲ್ಲಾ ಇದ್ದರೂ, ಜಿಎಸ್ ಟಿ ಯಲ್ಲಿ 12 ಸಾವಿರ ಕೋಟಿ ರೂ. ತೆರಿಗೆ ವಂಚನೆ ದಾಖಲಾಗಿದ್ದು, ಕೇಂದ್ರ ಹಣಕಾಸು ಸಚಿವಾಲಯವನ್ನು ಆತಂಕಕ್ಕೆ ತಳ್ಳಿದೆ.

ಹೌದು, ಈ ಕುರಿತು ಕೇಂದ್ರ ಪರೋಕ್ಷ ತೆರಿಗೆ ಮಂಡಳಿ ಮಾಹಿತಿ ನೀಡಿದ್ದು, ಕಳೆದ 8 ತಿಂಗಳಿನಿಂದ ನವಂಬರ್ ವರೆಗೆ ಒಟ್ಟು 12 ಸಾವಿರ ಕೋಟಿ ರೂ. ಏರುಪೇರಾಗಿದ್ದು, ಎಲ್ಲಾ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡ ಬಳಿಕವೂ ಇಷ್ಟು ಪ್ರಮಾಣದ ತೆರಿಗೆ ವಂಚನೆಯಾಗಿರುವುದು ಆತಂಕಕ್ಕೆ ಎಡೆ ಮಾಡಿದೆ.

ಜಿಎಸ್ ಟಿ ಅಡಿಯಲ್ಲಿ ಯಾರೂ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಂತದ್ದರಲ್ಲಿ 12 ಸಾವಿರ ಕೋಟಿ ರೂ.ನಷ್ಟು ತೆರಿಗೆ ವಂಚನೆ ಮಾಡಿರುವುದು ತೆರಿಗೆ ವಂಚಕರ ಚಾಣಾಕ್ಷತನಕ್ಕೆ ಸಾಕ್ಷಿ ಎಂದು ಪರೋಕ್ಷ ತೆರಿಗೆ ಮಂಡಳಿ ಸದಸ್ಯ ಜಾನ್ ಜೋಸೆಫ್ ಹೇಳಿದ್ದಾರೆ.

ಈ ಕುರಿತು ಜಿಎಸ್ ಟಿ ಕಾನೂನಿನಲ್ಲಿ ಕೆಲವು ಸುಧಾರಣಾ ಕ್ರಮಗಳನ್ನು ಸೇರಿಸುವ ಕುರಿತು ಚರ್ಚಿಸಲಾಗಿದ್ದು, ತೆರಿಗೆ ವಂಚನೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಾನ್ ಜೋಸೆಫ್ ಭರವಸೆ ನೀಡಿದ್ದಾರೆ.

Leave A Reply

Your email address will not be published.