ಬಿಬಿಎಂಪಿ ಸ್ಥಾಯಿ ಸಮಿತಿ ಹಗ್ಗಜಗ್ಗಾಟಕ್ಕೆ ನಾಳೆ ಕ್ಲೈಮ್ಯಾಕ್ಸ್

7,709

 ಬಿಬಿಎಂಪಿ ಸ್ಥಾಯಿ ಸಮಿತಿ ಹಗ್ಗಜಗ್ಗಾಟಕ್ಕೆ ಶುಕ್ರವಾರ ತೆರೆ ಬೀಳಲಿದೆ. ಬಿಬಿಎಂಪಿ 12 ಸಮಿತಿಗಳ ಅಧ್ಯಕ್ಷ ಆಯ್ಕೆ ಡಿ.14ರಂದು ನಡೆಯಲಿದೆ.ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸಭೆಯ ಅಧ್ಯಕ್ಷತೆವಹಿಸಲಿದ್ದಾರೆ.

ಬೆಂಗಳೂರಿನ ಉಪಮೇಯರ್ ಪಟ್ಟಕ್ಕೆ ಭದ್ರೇಗೌಡ ಹೆಸರು ಬಹುತೇಕ ಅಂತಿಮ

ಒಂದು ವಾರದ ಹಿಂದೆ ಸ್ಥಾಯಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ನಗರ ಯೋಜನೆ ಸ್ಥಾಯಿ ಸಮಿತಿ ನಿಗದಿತ 11 ಸದಸ್ಯರ ಬದಲು 9 ಜನ ಆಯ್ಕೆಯಾಗಿದ್ದಾರೆ.

ಈ ಸ್ಥಾಯಿ ಸಮಿತಿಗೆ ಮುಂದಿನ ದಿನಗಳಲ್ಲಿ ಇನ್ನಿಬ್ಬರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.ಸ್ಥಾಯಿ ಸಮಿತಿ ಸಂಭಾವ್ಯ ಅಧ್ಯಕ್ಷರ ಪಟ್ಟಿ: ಅಪೀಲು ಸ್ಥಾಯಿ ಸಮಿತಿ- ಸುಜಾತಾ ರಮೇಶ್, ಎರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ-ಹೇಮಲತಾ ಗೋಪಾಲಯ್ಯ, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ-ಲಾವಣ್ಯ ಗಣೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ-ಸೌಮ್ಯಾ ಶಿವಕುಮಾರ್, ಲೆಕ್ಕಪತ್ರ ಸ್ಥಾಯಿ ಸಮಿತಿ-ವೇಲುನಾಯರ್, ಆರೋಗ್ಯ ಸ್ಥಾಯಿ ಸಮಿತಿ-ಮುಜಾಹಿರ್ ಪಾಷಾ, ಆಡಳಿತ ಮತ್ತು ಸುಧಾರಣಾ ಸ್ಥಾಯಿ ಸಮಿತಿ-ಆನಂದ್, ತೋಟಗಾರಿಕೆ ಸ್ಥಾಯಿ ಸಮಿತಿ- ಐಶ್ವರ್ಯ, ವಾರ್ಡ್ ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿ-ಉಮ್ಮೇ ಸಲ್ಮಾ, ಶಿಕ್ಷಣ- ಇಮ್ರಾನ್ ಪಾಷಾ, ಮಾರುಕಟ್ಟೆ- ಫರೀದಾ ಇಶ್ತಿಯಾಕ್, ನಗರ ಯೋಜನೆ ಸ್ಥಾಯಿ ಸಮಿತಿ-ನಾಗರಾಜು ಇದ್ದಾರೆ.

ಬೆಂಗಳೂರಿನ 52ನೇ ಮೇಯರ್ ಆಗಿ ಗಂಗಾಂಬಿಕೆ ಆಯ್ಕೆ

ಶಾಸಕ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ಜಯಕ್ಕೆ ನೆರವಾಗಿದ್ದ ಬಿಜೆಪಿಯ ನಾಗರಾಜು ಅವರಿಗೆ ನಗರ ಯೋಜನೆ ಅಮಿತಿ ಅಧ್ಯಕ್ಷ ಸ್ಥಾನ ನೀಡಲು ಕಸರತ್ತು ನಡೆದಿದೆ.

Leave A Reply

Your email address will not be published.