ಆರ್ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ

6,823

ಭಾರತೀಯ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನೂತನ ಗವರ್ನರ್ ಸ್ಥಾನಕ್ಕೆ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕಗೊಂಡಿದ್ದಾರೆ.

ಉರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ನೀಡಿದ ನಂತರದ ಬೆಳವಣಿಯೆಲ್ಲಿ ಕೇಂದ್ರ ಸರ್ಕಾರ ನೂತನ ಗವರ್ನರ್ ನೇಮಕ ಮಾಡಿದೆ. ಶಕ್ತಿಕಾಂತ್ ದಾಸ್ ಕೇಂದ್ರ ಸರ್ಕಾರದ ಮಾಜಿ ಹಣಕಾಸು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಸೋಮವಾರ ವೈಯಕ್ತಿಕ ಕಾರಣ ನೀಡಿ ಉರ್ಜಿತ್ ಪಟೇಲ್ ಗರ್ವನರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ಅವರ ರಾಜೀನಾಮೆಯಿಂದ ತೆರವಾದ ಜಾಗದಲ್ಲಿ ೨೫ನೇ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ರನ್ನು ಆಯ್ಕೆ ಮಾಡಲಾಗಿದೆ. ಶಕ್ತಿಕಾಂತ್ ಮೂರು ವರ್ಷಗಳ ಕಾಲ ಈ ಹುದ್ದೆ ನಿಭಾಯಿಸಲಿದ್ದಾರೆ.

ಮೋದಿಯವರು ನವೆಂಬರ್ 8, 2016 ನೋಟು ನಿಷೇಧ ಘೋಷಣೆ ಮಾಡಿದ ಸಂದರ್ಭದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಶಕ್ತಿಕಾಂತ್ ದಾಸ್ ತಮ್ಮ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

ಕೇಂದ್ರ ಸರಕಾರ ಮತ್ತು ಆರ್ಬಿಐ ನಡುವೆ ಹಲವಾರು ತಿಂಗಳಿಂದ ತಿಕ್ಕಾಟ ನಡೆಯುತ್ತಿತ್ತು.

ಆರ್ಬಿಐ ಮತ್ತು ಕೇಂದ್ರದ ನಡುವಿನ ಭಿನ್ನಾಭಿಪ್ರಾಯ ಹಾಗು ಹಗ್ಗಜಗ್ಗಾಟಕ್ಕೆ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದು, ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.

Leave A Reply

Your email address will not be published.