ವಿದೇಶದಿಂದ ಹಿಂದಿರುಗಿದ ಕುಮಾರಸ್ವಾಮಿಗೆ ಬಿಜೆಪಿ ‘ಗ್ರ್ಯಾಂಡ್’ ವೆಲ್ ಕಮ್

5,487

ಬೆಂಗಳೂರು, [ಜ.03]: ವರ್ಷಾಂತ್ಯದಲ್ಲಿ ಕುಟುಂಬ ಸಮೇತ ಐದು ದಿನಗಳ ಕಾಲ ವಿದೇಶಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು [ಗುರುವಾರ] ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್​ ಕುಮಾರಸ್ವಾಮಿ ಅವರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ ಕುಮಾರಸ್ವಾಮಿ ಅವರನ್ನು ರಾಜ್ಯ ಬಿಜೆಪಿ ವೆಲ್ ಕಮ್ ಮಾಡುವ ಮೂಲಕ ಕಾಲೆಳೆದಿದೆ.

ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ತವರಿಗೆ ಮರಳಿದ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಸ್ವಾಗತ. ನಿಮ್ಮ ಹೊಸ ವರ್ಷಾಚರಣೆ ಚೆನ್ನಾಗಿತ್ತು ಎನಿಸುತ್ತದೆ ಎಂದು ಟ್ವೀಟ್​ ಮಾಡುವ ಮೂಲಕ ಎಚ್​ಡಿಕೆ ಅವರನ್ನು ಬಿಜೆಪಿ ಸ್ವಾಗತಿಸಿದೆ.
ತಮ್ಮ ಟ್ವೀಟ್​ನಲ್ಲಿ ನಿಮ್ಮ ಪ್ರವಾಸಗಳೆಲ್ಲವೂ ಮುಗಿದಿದ್ದರೆ, ನೀವು ಇನ್ನು ಮುಂದೆ ಮಾಡಬೇಕಾದ ಕೆಲಸಗಳು ಹೀಗಿವೆ ಎಂದು ಸಾಲ ಮನ್ನಾ, ಸ್ಟೀಲ್ ಬ್ರಿಡ್ಜ್ ವಿವಾದ ಸೇರಿದಂತೆ ಹಲವು ಪಟ್ಟಿ ಮಾಡಿ ಸಿಎಂ ಕರ್ತವ್ಯವನ್ನು ನೆನಪಿಸಿದ್ದಾರೆ.

Leave A Reply

Your email address will not be published.